ಕ್ರೂಸಿಫೆರೀ
ದ್ವಿದಳಸಸ್ಯ ಗುಂಪಿನ ರೀಯಡೇಲೀಸ್ ಗಣಕ್ಕೆ ಸೇರಿದ ಒಂದು ಕುಟುಂಬ. ಬ್ರಾಸಿಕೇಸೀ ಇದರ ಪರ್ಯಾಯನಾಮ; ಸುಮಾರು 350 ಜಾತಿ ಮತ್ತು ಸುಮಾರು 2500 ಪ್ರಭೇದಗಳನ್ನೊಳಗೊಂಡಿದೆ. ಈ ಕುಟುಂಬಕ್ಕೆ ಸೇರಿದ ಪಾಲು ಸಸ್ಯಗಳು ಪ್ರಪಂಚದ ಉತ್ತರಾರ್ಧಕ್ಕೆ, ಮುಖ್ಯವಾಗಿ ತಂಪು ಹವೆಯುಳ್ಳ ಪ್ರದೇಶಗಳಿಗೆ ಸೀಮಿತವಾಗಿದ್ದರೂ ಸುಮಾರು 10 ಜಾತಿಗಳು ಪ್ರಪಂಚದ ಎಲ್ಲ ಕಡೆ ಹರಡಿವೆ. ಏಷ್ಯದಲ್ಲಿ ಸುಮಾರು 107 ಜಾತಿಗಳು ಕಂಡುಬರುತ್ತವೆ.

ಇದಕ್ಕೆ ಸೇರಿದ ಪ್ರಭೇದಗಳೆಲ್ಲ ವಾರ್ಷಿಕ, ದ್ವೈವಾರ್ಷಿಕ ಅಥವಾ ಬಹುವಾರ್ಷಿಕ ಮೂಲಿಕೆ ಸಸ್ಯಗಳು. ಕಾಂಡದ ಮೇಲೆ ಕವಲಾದ ಅಥವಾ ನಕ್ಷತ್ರಾಕಾರದ ಏಕಕೋಶ ರೋಮಗಳಿವೆ. ಎಲೆಗಳು ಸರಳ ಮಾದರಿಯವು; ಅಭಿಮುಖವಾಗಿ ಜೋಡಣೆಗೊಂಡಿವೆ. ವೃಂತಪರ್ಣಗಳು (ಸ್ಟಿಪ್ಯೂಲ್ಸ್) ಇಲ್ಲ. ದ್ವೈವಾರ್ಷಿಕ ಸಸ್ಯಗಳಲ್ಲಿ ರ್ಯಾಡಿಕಲ್ ಎಲೆಗಳೂ ಇರುವುದುಂಟು. ಅಪರೂಪವಾಗಿ ಮೇಲಿನ ಎಲೆಗಳ ಕಂಕುಳಲ್ಲೊ (ಉದಾ: ಡೆಂಟೇರಿಯ ಬಲ್ಬಿಫೆರ), ಎಲೆಗಳ ಮೇಲೊ (ಉದಾ: ಕಾರ್ಡಮೈನ್ ಪ್ರೆಟನ್ಸಿಸ್) ಸಣ್ಣ ಗಾತ್ರದ ಗಂಟುಗಳಂಥ ರಚನೆಗಳು ಮೂಡುತ್ತವೆ. ಇವಕ್ಕೆ ಬಲ್ಬಿಲುಗಳೆಂದು ಹೆಸರು. ಇವು ಗಿಡದಿಂದ ಬೇರ್ಪಟ್ಟು ನಿರ್ಲಿಂಗ ರೀತಿ ವಂಶಾಭಿವೃದ್ಧಿಗೆ ಸಹಾಯಕವಾಗುತ್ತವೆ. ಕೆಲವು ಪ್ರಭೇದಗಳಲ್ಲಿ ಎಲೆಗಳು ಆಹಾರವನ್ನು ಶೇಖರಿಸುವ ಅಂಗಗಳಾಗಿ ಮಾರ್ಪಾಡಾಗಿರುತ್ತವೆ. ಇಂಥ ಎಲೆಗಳನ್ನು ತರಕಾರಿಯಾಗಿ ಉಪಯೋಗಿಸುವರು. ಉದಾಹರಣೆಗೆ ಎಲೆಕೋಸು.
ಬೇರು ತಾಯಿಬೇರು ಮಾದರಿಯದು; ಮೂಲಂಗಿ (ರಫ್ಯಾನಸ್ ಸೇಟಿವಸ್), ಟರ್ನಿಫ್ (ಬ್ರಾಸಿಕ ಕ್ಯಾಂಪೆಸ್ಟ್ರಿಸ್) ಮುಂತಾದವುಗಳಲ್ಲಿ ಆಹಾರ ಶೇಖರಣಾಂಗವಾಗಿ ಮಾರ್ಪಾಡಾಗಿರುತ್ತದೆ.

ಹೂಗೊಂಚಲು ಅಂತ್ಯಾರಂಭಿ ಮಾದರಿಯದು. ಹೂಗೊಂಚಲಿನ ಹೂಗಳೆಲ್ಲಕ್ಕೂ ಒಂದೇ ಉದ್ದದ ತೊಟ್ಟು ಇರುವುದರಿಂದ ಎಲ್ಲ ಹೂಗಳೂ ಒಂದೇ ಮಟ್ಟದಲ್ಲಿರುತ್ತವೆ. ಹೂಗಳು ದ್ವಿಲಿಂಗಿಗಳು ಆರೀಯ ಸಮಾಂಗತೆಯುಳ್ಳವು. ಒಂದೊಂದು ಹೂವಿನಲ್ಲೂ ನಾಲ್ಕು ಬಿಡಿಬಿಡಿಯಾದ ಪುಷ್ಪಪತ್ರಗಳು, ನಾಲ್ಕು ದಳಗಳು, 6 ಕೇಸರಗಳು, 2 ಕಾರ್ಪೆಲುಗಳಿಂದ ಕೂಡಿದ ಉಚ್ಚಸ್ಥಾನದ ಅಂಡಾಶಯ ಇವೆ. ಪುಷ್ಪಪತ್ರಗಳು 2 ವರ್ತುಲಗಳಲ್ಲಿ ಜೋಡಣೆಗೊಂಡಿವೆ. ದಳಗಳ ಜೋಡಣೆ ಶಿಲುಬೆಯಂತೆ. ಈ ಜೋಡಣೆಗೆ ಕ್ರೂಸಿಫಾರಮ್ ಜೋಡಣೆ ಎಂದು ಹೆಸರು. ಪ್ರತಿಯೊಂದು ದಳದ ಬುಡಭಾಗ ಸಣ್ಣದಾಗಿದ್ದು ಬಾಗಿಕೊಂಡಿದೆ. ಕೇಸರುಗಳೂ ಎರಡು ವರ್ತುಲಗಳಲ್ಲಿ ಜೋಡಣೆಗೊಂಡಿವೆ. ಹೊರವರ್ತುಲದಲ್ಲಿ 2 ಕೇಸರಗಳೂ ಒಳವರ್ತುಲದಲ್ಲಿ 4 ಕೇಸರಗಳೂ ಇವೆ. ಹೊರಗಿನವು ಉದ್ದದಲ್ಲಿ ಒಳಗಿನವಕ್ಕಿಂತ ಚಿಕ್ಕವು. ಈ ರೀತಿಯ ಕೇಸರ ರಚನೆಗೆ ಟೆಟ್ರಡೈನಮಸ್ ಎಂದು ಹೆಸರು. ಇದು ಕ್ರೂಸಿಫೆರೀ ಕುಟುಂಬದ ಮುಖ್ಯ ಲಕ್ಷಣ.

ಅಂಡಕೋಶದೊಳಗೆ ಪ್ರತಿ ಕಾರ್ಪೆಲಿನ ಒಳಭಿತ್ತಿಗೆ ಅಂಟಿಕೊಂಡಂತೆ ಎರಡು ಸಾಲುಗಳಲ್ಲಿ ಅಂಡಕಗಳು ಜೋಡಣೆಗೊಂಡಿವೆ. ಎರಡು ಕಾರ್ಪೆಲುಗಳ ಮಧ್ಯೆ ಬೆಳೆದ ಮಿಥ್ಯಾಪಟಲದಿಂದಾಗಿ ಅಂಡಾಶಯ ಫಲವಾಗಿ ಬೆಳೆದಾಗ ಎರಡು ಭಾಗಗಳಾಗಿ ಒಡೆಯುತ್ತದೆ. ಈ ಪಟಲಕ್ಕೆ ರೆಪ್ಲಮ್ ಎಂದು ಹೆಸರು. ಪುಷ್ಪಪತ್ರ, ದಳ ಅಥವಾ ಕೇಸರಗಳ ಕೆಳಗಡೆ ಕೆಲವೊಮ್ಮೆ ಮಧುಗ್ರಂಥಿಗಳಿರುವುದುಂಟು. ಮೇಲೆ ಹೇಳಿದ ಹೂವಿನ ರಚನೆಗಿಂತ ಸ್ವಲ್ಪ ಭಿನ್ನರೂಪದ ರಚನೆಯನ್ನು ಕೆಲವು ಜಾತಿಯ ಗಿಡಗಳಲ್ಲಿ ಕಾಣಬಹುದು. ಉಭಯಪಾಶ್ರ್ವ ಸಮಾಂಗತೆಯುಳ್ಳ ಹೂಗಳು, ದಳರಹಿತ ಹೂಗಳು ಮತ್ತು ದಳಗಳು ಹಾಗೂ ಕೇಸರಗಳು ಬೇರೆ ರಚನೆಗಳಾಗಿ ಮಾರ್ಪಟ್ಟ ನಿದರ್ಶನಗಳಿವೆ.

ಫಲ ಸಂಪುಟ ಮಾದರಿಯದು; ಮೂಲಂಗಿ (ರಫ್ಯಾನಸ್ ಸೇಟಿವಸ್), ಟರ್ನಿಪ್ (ಬ್ರಾಸಿಕ್ ಕ್ಯಾಂಪೆಸ್ಟ್ರಿಸ್) ಮುಂತಾದವುಗಳಲ್ಲಿ ಆಹಾರ ಶೇಖರಣಾಂಗವಾಗಿ ಮಾರ್ಪಾಡಾಗಿರುತ್ತದೆ.

ಹೂಗೊಂಚಲು ಅಂತ್ಯಾರಂಭಿ ಮಾದರಿಯದು. ಹೂಗೊಂಚಲಿನ ಹೂಗಳೆಲ್ಲಕ್ಕೂ ಒಂದೇ ಉದ್ದದ ತೊಟ್ಟು ಇರುವುದರಿಂದ ಎಲ್ಲ ಹೂಗಳೂ ಒಂದೇ ಮಟ್ಟದಲ್ಲಿರುತ್ತವೆ. ಹೂಗಳು ದ್ವಿಲಿಂಗಿಗಳು; ಆರೀಯ ಸಮಾಂಗತೆಯುಳ್ಳವು. ಒಂದೊಂದು ಹೂವಿನಲ್ಲೂ ನಾಲ್ಕು ಬಿಡಿಬಿಡಿಯಾದ ಪುಷ್ಪಪತ್ರಗಳು, ನಾಲ್ಕು ದಳಗಳು, 6 ಕೇಸರಗಳು, 2 ಕಾರ್ಪೆಲುಗಳಿಂದ ಕೂಡಿದ ಉಚ್ಚಸ್ಥಾನದ ಅಂಡಾಶಯ ಇವೆ. ಪುಷ್ಪಪತ್ರಗಳು 2 ವರ್ತುಲಗಳಲ್ಲಿ ಜೋಡಣೆಗೊಂಡಿವೆ. ದಳಗಳ ಜೋಡಣೆ ಶಿಲುಬೆಯಂತೆ. ಈ ಜೋಡಣೆಗೆ ಕ್ರೂಸಿಫಾರಮ್ ಜೋಡಣೆ ಎಂದು ಹೆಸರು. ಪ್ರತಿಯೊಂದು ದಳದ ಬುಡಭಾಗ ಸಣ್ಣದಾಗಿದ್ದು ಬಾಗಿಕೊಂಡಿದೆ. ಕೇಸರುಗಳೂ ಎರಡು ವರ್ತುಲಗಳಲ್ಲಿ ಜೋಡಣೆಗೊಂಡಿವೆ. ಹೊರವರ್ತುಲದಲ್ಲಿ 2 ಕೇಸರಗಳೂ ಒಳವರ್ತುಲದಲ್ಲಿ 4 ಕೇಸರಗಳೂ ಇವೆ. ಹೊರಗಿನವು ಉದ್ದದಲ್ಲಿ ಒಳಗಿನವಕ್ಕಿಂತ ಚಿಕ್ಕವು. ಈ ರೀತಿಯ ಕೇಸರ ರಚನೆಗೆ ಟೆಟ್ರಡೈನಮಸ್ ಎಂದು ಹೆಸರು. ಇದು ಕ್ರೂಸಿಫೆರೀ ಕುಟುಂಬದ ಮುಖ್ಯ ಲಕ್ಷಣ.

ಫಲ ಸಂಪುಟ ಮಾದರಿಯದು. ಬೀಜಗಳು ಮಿಥ್ಯಾಪಟಲಕ್ಕೆ ಅಂಟಿಕೊಂಡಿರುವಂತೆಯೇ ಫಲ ಕೆಳಗಡೆಯಿಂದ ಎರಡು ಹೋಳಾಗಿ ಒಡೆಯುತ್ತದೆ. ಇದನ್ನು ಸಾಮಾನ್ಯವಾಗಿ ಸಿಲಿಕ್ವ ಎಂದೂ ಹಣ್ಣಿನ ಉದ್ದ ಅದರ ಅಗಲದಷ್ಟೆ ಇದ್ದಾಗ ಸಿಲಿಕ್ಯುಲ ಎಂದೂ ಕರೆಯಲಾಗುತ್ತದೆ. ಫಲದ ರಚನೆ ಹಾಗೂ ಬೀಜಗಳ ಜೋಡಣೆಯಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬರುತ್ತದೆ. ಸಾಮಾನ್ಯವಾಗಿ ಬೀಜಗಳು ಪ್ರತಿಕೋಣೆಯಲ್ಲಿ ಎರಡು ಸಾಲಿನಲ್ಲಿರುತ್ತವೆ. ಆದರೆ ಕೆಲವು ಸಾರಿ ಒಂದು ಕೋಣೆಯಲ್ಲಿ ಬೀಜಗಳು ಒಂದೇ ಸಾಲಿನಲ್ಲಿ ಇರುವುದುಂಟು. ಮತ್ತೆ ಕೆಲವು ವೇಳೆ ಒಂದು ಕೋಣೆಯ ಬೀಜಗಳ ಸಾಲು ಮತ್ತೊಂದು ಕೋಣೆಯ ಬೀಜಗಳ ಸಾಲಿಗೆ ಅಭಿಮುಖವಾಗಿರುತ್ತದೆ. ಇಂಥ ಸಂದರ್ಭಗಳಲ್ಲಿ ಫಲದಲ್ಲಿ ಒಂದೇ ಸಾಲು ಬೀಜವಿರುವ ಹಾಗೆ ಕಾಣುತ್ತದೆ (ಉದಾಹರಣೆಗೆ ಮೂಲಂಗಿ). ಬೀಜಗಳ ಮಧ್ಯೆ ತಗ್ಗುಗಳು ಬೆಳೆದು ಮುಂದೆ ಒಂದೊಂದು ಬೀಜಗಳಿರುವ ಭಾಗಗಳಾಗಿ ಬೇರ್ಪಡಬಹುದು. ಹಣ್ಣು ಒಡೆದಾಗ ಬೀಜಗಳು ಮಧ್ಯದ ಪೊರೆಗೆ ಲಘುವಾಗಿ ಅಂಟಿಕೊಂಡಿರುತ್ತವೆ. ಗಾಳಿಯಿಂದ ಇಲ್ಲವೆ ಇನ್ನಾವುದೊ ಕಾರಣದಿಂದ ಗಿಡ ಅಲುಗಾಡಿದಾಗ ಬೀಜಗಳು ಪೊರೆಯಿಂದ ಕಳಚಿ ಬೀಳುತ್ತವೆ. ಬೀಜಗಳಿಗೆ ಕೆಲವು ಸಾರಿ ರೆಕ್ಕೆಯಂಥ ಪೊರೆಯಿದ್ದು ಅದರ ಸಹಾಯದಿಂದ ಅವು ಗಾಳಿಯಲ್ಲಿ ದೂರ ಸಾಗಬಲ್ಲವು.

ಕ್ರೂಸಿಫೆರೀ ಕುಟುಂಬ ಹಲವಾರು ಉಪಯುಕ್ತ ಸಸ್ಯಗಳನ್ನು ಒಳಗೊಂಡಿದ್ದು ಆರ್ಥಿಕ ಪ್ರಾಮುಖ್ಯ ಗಳಿಸಿದೆ. ಉದಾಹರಣೆಗೆ ತರಕಾರಿ ಸಸ್ಯಗಳಾದ ಬ್ರಾಸಿಕ ಓಲರೇಸಿಯ ಪ್ರಭೇದದ ವಿವಿಧ ಬಗೆಗಳು (ಎಲೆಕೋಸು, ಗೆಡ್ಡೆಕೋಸು, ಹೂಕೋಸು, ಇತ್ಯಾದಿ). ರಫ್ಯಾನಸ್ ಸೇಟಿವಸ್ (ಮೂಲಂಗಿ), ಬ್ರಾಸಿಕ ಕ್ಯಾಂಪೆಸ್ಟ್ರಿಸ್ (ಟರ್ನಿಪ್), ಲೆಪಿಡಿಯಮ್ ಸೇಟಿವಮ್ (ಕುರ್ತಿಗೆ - ಗಾರ್ಡನ್ ಕ್ರೆಸ್), ಸಂಬಾರ ಸಸ್ಯಗಳಾದ ಬ್ರಾಸಿಕ ನೈಗ್ರ (ಸಾಸುವೆ), ಬ್ರಾಸಿಕ ನೇಪಸ್ (ರೇಪ್), ಅಲಂಕಾರ ಸಸ್ಯಗಳಾದ ಐಬೆರಿಸ್ (ಕ್ಯಾಂಡಿಟಫ್ಟ್), ಕೈರ್ಯಾಂತಸ್ ಮುಂತಾದವು ಈ ಕುಟುಂಬಕ್ಕೆ ಸೇರಿವೆ.           (ಎಸ್.ಆರ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ